kannada Rajyotsava @SJMIT

 

 

 

 

ಎಸ್‌ ಜೆ ಎಂತಾಂತ್ರಿಕ | ಮಹಾವಿದ್ಯಾಲಯದಲ್ಲಿ 50ನೇ ಕನ್ನಡ ರಾಜ್ಯೋತ್ಸವವನ್ನು “ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ” ಎಂಬ ಅಭಿಯಾನದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಪ್ರಾಂಶುಪಾಲರಾದ ಡಾ.ಭರತ್‌ ಪಿ.ಬಿ ಮಾತನಾಡಿ, ಅರಸು | ಮನೆತನಗಳಾದ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣದ | ಚಾಲುಕ್ಯರು, ಹೊಯ್ಸಳರು, ಗಂಗರು ಹಾಗೂ ಸೇವಣರು ಕನ್ನಡದಲ್ಲಿ ಆಡಳಿತ ನಡೆಸಿ ಕನ್ನಡದ ಭಾಷೆ ಬೆಳವಣಿಗೆಗೆ ಕಾರಣರಾದರು. | ಕನ್ನಡ ಭಾಷೆ ಜೀವಂತವಾಗಿರಬೇಕಾದರೆ ನಾವು ಹೆಚ್ಚು ಹೆಚ್ಚು ಕನ್ನಡವನ್ನು ಬಳಸಬೇಕು. ಕೀಳಿರಿಮೆ ತೊಡೆದು ನಾವು ಪ್ರತಿನಿತ್ಯ | ಕನ್ನಡವನ್ನು ಬಳಸಿ ಕನ್ನಡವನ್ನು ಉಳಿಸುವ ಬೆಳಸುವ ಕೆಲಸ | ಮಾಡಬೇಕು. ನಮ್ಮ ಮನೆಗಳಲ್ಲಿ, ಸ್ನೇಹಿತರಲ್ಲಿ, ಶುಭ | ಸಮಾರಂಭಗಳಲ್ಲಿ ಕನ್ನಡವನ್ನೇ ಮಾತನಾಡಬೇಕು. ಕನ್ನಡ |

ಪುಸ್ತಕಗಳನ್ನು ಹೆಚ್ಚಾಗಿ ಓದಬೇಕು. ಕನ್ನಡದ ಪುಸ್ತಕಗಳನ್ನು ಸಂಗ್ರಹಿಸುವ ಹವ್ಯಾಸ ಬೆಳಸಿಕೊಳ್ಳಬೇಕು. ಕನ್ನಡಕ್ಕೆ ನಾವು ಹೆಚ್ಚು ಪ್ರಾಧಾನ್ಯ ನೀಡಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ವಿವಿಧ ಇಲಾಖೆ ಮುಖ್ಯಸ್ಥರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ.ಕುಮಾರಸ್ವಾಮಿ ಕೆ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಪ್ರಖ್ಯಾತ ಕವಿಗಳಾದ ಹುಯಿಳಗೋಳ ನಾರಾಯಣರಾಯರ-ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು, ಕುವೆಂಪುರವರಎಲ್ಲಾದರೂ ಇರು ಎಂತಾದರೂ ಇರು, ದ.ರಾ.ಬೇಂದ್ರೆರವರ- ಒಂದೇ ಒಂದೇ ಕರ್ನಾಟಕ ಒಂದೇ, ಸಿದ್ದಯ್ಯ ಪುರಾಣಿಕರವರ-ಹೊತ್ತಿತೋ ಹೊತ್ತಿತ ಕನ್ನಡದ ದೀಪ, ಚನ್ನವೀರಕಣವಿರವರ- ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಗೀತೆಗಳನ್ನು ಸಮೂಹ ಗಾಯನದಲ್ಲಿ ಹಾಡಲಾಯಿತು.